ಒಂದು ಚಳಿಗಾಲದ ಸಮಯದಲಿ


ಬರೆಯದೆ ದಿನಗಳು ಮೆಲ್ಲನೆ ಸವೆದವು… ಮತ್ತೆ ಬರಬೇಕು ಹೊಸ ಕವನ್ಅದೊಂದಿಗೆ ಎಂದು ಮಾಡಿದ ಸಂಕಲ್ಪ ಈಗ ಸಾಕಾರವಾಗಿದೆ. ಯಾಂತ್ರಿಕ ಹಾಗೂ ಬದುಕಿನ ಭರವಸೆಯನ್ನು ಅಲುಗಾಡಿಸುತ್ತಿರುವ, ಮುಂದೇನು ಎನ್ನುವ ಪ್ರಶ್ನೆಗಳು ನನ್ನಲ್ಲಿ ದಟ್ಟವಾಗಿ ಕಾಡುತ್ತಿರುವ ಈ ದಿನದಲ್ಲಿ ಕವನಗಳು ಹೊಸ ಭರವಸೆಯನ್ನು ನೀಡುತ್ತಿವೆ.. ಹೀಗೆ ಸಾಗಲಿ ಬದುಕು ಮುಂದೆಯೆನುತಾ ನಿಮ್ಮ ಮುಂದೆ ನನ್ನ ಇತ್ತೀಚಿಗಿನ ಕವನ – ಒಂದು ಚಳಿಗಾಲದ ಸಮಯದಲಿ ನಿಮ್ಮ ಮುಂದಿಡುತ್ತಿದ್ದೇನೆ.

– ನೀರತೆರೆಯ ಹುಡುಗ

ಒಂದು ಚಳಿಗಾಲದ ಸಮಯದಲ್ಲವಳು
ನನ್ನನ್ನು ತೊರೆದಳು.
ಆಗ ಕೊರೆಯುತ್ತಿತ್ತು ಚಳಿ ಗಾಢವಾಗಿ
ಮತ್ತಾಕೆಯ ಆಗಲುವಿಕೆ.

 

ನಿಶ್ಯಬ್ದದ ಜಾವದಲ್ಲಿ ಕಡಲು
ಸದ್ದು ಮಾಡಿ ಸ್ತಬ್ದವಾಗುವ ಮುನ್ನಾ
ಅವಳ ಕನವರೆಕೆಯಲ್ಲಿ ಅರೆಬೆಂದ ನಿದ್ದೆಯಲ್ಲಿರುವವನನ್ನು
ಎಬ್ಬಿಸಿ ಮತ್ತೆ ಪಾಳಿಗೆ ತೆರಳುತ್ತದೆ.

 

ಇನ್ನೂ ಹಾಳು ಹಿಡಿದ ಗಾಳಿ
ಪಡುವಣದ ಥಂಡಿಯನ್ನು
ಹೊತ್ತು ತರುತ್ತದೆ ಕೋಣೆಗೆ
ಹಾಗೂ ಕಣ್ಣಿಗೆ ಹಿಡಿಯದ ನಿದಿರೆಯ ಅಣಕಿಸುತ್ತದೆ.

 

ನೆನಪು ಹೊತ್ತ ಕಡಲಲೆಗಳು ದಡಕ್ಕೆ ಮರಳುವಾಗ
ಕಡಲ ತಡಿಯುದ್ದಕ್ಕೂ ಹೆಜ್ಜೆಯಿಕ್ಕುವ ನನಗೆ
ಎದುರಾಗುವ ಮತ್ಸ್ಯ ಕನ್ಯೆಗೆ
ಬದುಕಿಗೆ ಚಳಿಯಿಡಿಸಿ ಹೀಗಿರಲಾರೆಯೆನ್ನುವೆ
ಆಕೆ ನಿರ್ಭಾವುಕ ಭಾವದಿಂದ ಹೊರಬರಲಾರಳು.

 

ಪರವಾಗಿಲ್ಲ.
ನಿನ್ನೆದೆಗಿತ್ತ ಬಿಸಿ ಸ್ಪರ್ಶ, ತುಟಿಗಿತ್ತ ಮುತ್ತು ಮತ್ತು ಅಪ್ಪುಗೆಯ
ವಾಪಾಸು ಕೊಡೆಯೆನುತಾ ಅವಳೆದೆಗೆ ಕೊಳ್ಳಿಯಿಡುವೆ.

 

ದುರದುರನೆ ನಡೆವ ಅವಳ ದಾರುಣತೆಗೆ
ಮತ್ತು ನನ್ನೊಳಗಿನ ಕ್ರೂರತೆಗೆ
ಕಡಲು ಕೇಕೆ ಹಾಕಿ ಕುಣಿಯುವುದು.

****

ತಿಂಗಳು ಮಾಸಿಕ ಜುಲೈ ೨೦೧೦ ಕ್ಕೆ ಪ್ರಕಟವಾಗಿದೆ.

About ನೀರ ತೆರೆ
ಕಡಲ ತಡಿಯಲ್ಲಿ ಕನಸ ಕಾಣುತ್ತಾ.. ಮನಸ್ಸು ಬಂದಷ್ಟು ದೂರ ಬೇಲೆಯಲ್ಲಿ ನಡೆಯುತ್ತಾ, ಪಕ್ಕದಲ್ಲಿ ರಂಪಣಿ ಎಳೆಯುವ ಗೆಳೆಯರ " ಓ ಬೇಲೆ" ಸದ್ದಿಗೆ ಕಿವಿ ಕೊಡುವವನು ನಾನು. ಮೇಲೆಳುವ ನೀರ ತೆರೆಗೆ ಮನಸ್ಸಿನಲ್ಲಿ ತೆರೆಗಳನ್ನೆಳಿಸುತ್ತಾ ಈ ದಕ್ಷಿಣ ಕನ್ನಡ ಎಷ್ಟು ಸುಂದರವೆಂದುಕೊಳ್ಳುವವನು. ಬಾನಲ್ಲಿ ಮೂಡುವ ಚಿತ್ತಾರಗಳಿಗೆ, ಮನಸ್ಸಿನ ಚಿತ್ತಾರಗಳಿಗೆ ಉಲ್ಲಾಸಗೊಳ್ಳುತ್ತಾ ಸ್ತಬ್ದಗೊಳ್ಳುವ ದಿನಚರಿಯನ್ನು ಪಡುವಣದಲ್ಲಿ ಕಾಯುತ್ತಾ ನೀರ ತೆರೆಗಳಿಗೆ ಕಾಲೊಡ್ಡಿ ಸರಿ ರಾತ್ರಿವರೆಗೆ ಮನೆಗೆ ಹೊರಡುವವನು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: