ತುಳುವರೇ ಕೊಂಚ ಇಲ್ಲಿ ಬನ್ನಿ

ಕರಾವಳಿ ಕರ್ನಾಟಕ ಸಂಕಟದಲ್ಲಿದೆಯೇ? ಪ್ರಶ್ನೆ ನಮಲ್ಲಿ ಹುಟ್ಟಿದೆ. ಹೌದು. ಒಂದರ ಮೆಲೊಂದು ಬೃಹತ್ ಪರಿಸರಕ್ಕೆ ಮಾರಕವಾದ ಕಾರ್ಖಾನೆಗಳು ಸರಕಾರ ಎತ್ತಿ ಕಡಲ ತಡಿಗೆ ಹಾಕುತಿದೆ. ಪ್ರಪಂಚದ ೧೮ ನೇ ಸೂಕ್ಷಮ ಪ್ರದೇಶವೆಂದು ಹೇಳಲ್ಪಟ್ಟ. ಸರಕಾರದಲ್ಲಿರುವ ರಾಜಕಾರಣಿಗಳಿಗೆ ದೇವಸ್ಥಾನಗಳು ನೆನಪಾಗುವ, ಮೂರು ಮಿಲಿಯನ್ ಜನರು ಮಾತನಾಡುವ ತುಳು ಭಾಷಿಕ ಜನರ ತುಳುನಾಡು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವ ಬೀತಿಯಲ್ಲಿದೆ…

ಒಂದು ವಿಮರ್ಶತ್ಮಾಕ ಲೇಖನ ಸಧ್ಯದಲ್ಲಿ ಪ್ರಕಟಿಸಲಿದ್ದೇನೆ ಇಲ್ಲಿ..
ನನ್ನ ಪ್ರಿಯ ಕರಾವಳಿಗರೆ ನಿಮಗೆ ಈ ಬಗ್ಗೆ ಏನೆನಿಸುತ್ತಿದೆ…

ದಕ್ಷಿಣ ಕರಾವಳಿಗರ ನೋವು ಎಂದು ಸರಕಾರದ ಕಿವಿ ಮುಟ್ಟಿದ್ದೆ ಇಲ್ಲ. ನಿರಂತರ ಅವಗಣನೆಗೆ ಒಳಗಾದರು ನಾವು ನಮ್ಮ ಸ್ವ ಶಕ್ತಿಯಿಂದಲೇ ಈ ಕರಾವಳಿಯಲ್ಲಿ ಬದುಕುತ್ತಿದ್ದೇವೆ… BC Road to ಕೆ.ಆರ್.ಇ.ಸಿ ವರೆಗಿನ ಚತುಷ್ಪದ ರಸ್ತೆಯ ಕಾಮಾಗಾರಿ ಶುರುವಾಗಿ ಆರು ವರುಶವಾದರೂ ಮುಗಿದಿಲ್ಲ. ಹಾಗೂ ಅದಿರು ಲಾರಿಗಳ ದೆಸೆಯಿಂದ ಹಾಳಾದ ರಸ್ತೆಗೆ ಕಾಯಕಲ್ಪ ಆಗಿಲ್ಲ ಮತ್ತು  ಈ ನಡುವೆ ರಸ್ತೆ ಪ್ರಾಣ ಬಿಟ್ಟವರ ಸಂಖ್ಯೆ ಯಾರ ಕಣ್ಣಿಗೂ ಬಿದ್ದಿಲ್ಲ.. ಈ ನಡುವೆ ಭಾರತದ ೭೩ ನೇ ಕಲುಷಿತ ನಗರದ ಕೀರಿಟ.. ಅಂದರೆ ಕರ್ನಾಟಕದ ಅತೀ ಕಲುಷಿತ ನಗರ/ ಪ್ರದೇಶ. ನೀರಿ ವರದಿ, ಡ್ಯಾನಿಡ ವರದಿ, ಸಾಗರ ಧಾರ ಗೋವಾದ ವರದಿ ಕತ್ತಲೆಯಲ್ಲಿ ಇವೆ… ಕಡಲು ಕೊರೆತದ ಹೆಸರಿನಲ್ಲಿ ಹಣ ಗುಳುಂ ಆಗುತ್ತಿದೆ ಹೊರತು ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ.

ಭಾಷಾ ಅಲ್ಪ ಸಂಖ್ಯಾತರಾದ ನಾವು ನಮ್ಮ ಮಾತೃ ಭಾಷೆಯ ಮೇಲೆ ಮತ್ತು ನಮ್ಮ ವಿಭಿನ್ನ ಸಂಸ್ಕೃತಿಯ ಮೇಲೆ ಆಗುತ್ತಿರುವ ಹಲ್ಲೆಯನ್ನು ಮೌನವಾಗಿ ಊನವಾದವರಂತೆ ಗಮನಿಸುತ್ತಿದ್ದೇವೆ… ತುಳುವರ ಕೊಂಚ  ಇಲ್ಲಿ ಬನ್ನಿ( ಕರಾವಳಿ ಕನ್ನಡಿಗರ್ರು ಆಮೇಲೆ ಮೊದಲು ನಾವು ತುಳುವರು)

%d bloggers like this: