ವಾರಕ್ಕೊಂದು ಕವಿತೆಯನ್ನು ಇತ್ತೀಚೆಗೆ ಬಿಡುಗಡೆಯಾದ ‘ನನ್ನ ಗ್ಯಾಲರಿಯೊಳಗೆ’ ಕವನ ಸಂಕಲನದಿಂದ ಪ್ರಕಟಿಸುವನಿದ್ದೇನೆ.

ಸಾವೆಂದರೆ

ಹೀಗೆ ಒಲವಿನ ಮಾತಿನಲ್ಲಿ
ಒಳಗೊಳ್ಳುತ್ತಾ ಅವಳಲ್ಲಿ ಹೇಳುವೆ
ಸಾವೆಂದರೆ-
ನನ್ನೊಳಗಿನ ಅಂತ್ಯದ ಹೆದರಿಕೆ

ಅವಳನ್ನುವಳು –
ತಪ್ಪು ನನ್ನ ಹುಡುಗನೇ
ಸಾವೆಂದರೆ-
ನಾವಿಬ್ಬರೂ ಬೆಸೆದ
ಒಲವ ಧಾರವೊಂದರ ಕಡಿತ

ಸಾವೆಂದರೆ-
ನಮ್ಮ ಮೇಲಿನ
ಪ್ರೀತಿಯ ಅಂತ್ಯ

ಕೊನೆಗೆ,
ಸಾವೆಂದರೆ-
ನೀನು ಅಥವಾ ನಾನು
ಪರಸ್ಪರ ಒಬ್ಬರಿಗೊಬ್ಬರು
ಇರದ ಪ್ರಪಂಚ

ಮಧ್ಯದ ನಶೆಯಂತಹ ಹಳೇ ಪ್ರೇಯಸಿಯರು ಮತ್ತು ನಾನು

idu nanna badukina antaha kavite………………………………

ಮಂದ್ರ ಕತ್ತಲಿನ ಹಳೆಯ ಬಾರಿನ ಘಾಟಿನಂತೆ

ಹಳೇ ಪ್ರೇಯಸಿಯರು ಒಂದು ಮಧುರ ನೆನಪಾಗಿ ಕಾಡುತ್ತಾರೆ.

 

ಈಗ ಅವರಿಲ್ಲದ ಬಾರಿನಲ್ಲಿ ಕುಡಿಯುತ್ತಾ

ಹಳೇ ಕಾಲದ ನಶೆಯನ್ನು ಮೆಲುಕು ಹಾಕುತ್ತೇನೆ.

 

ಅವರೀಗ ಹೊಸ ಪ್ರಿಯಕರರ ಮಡಿಲನ್ನು ಹೊಂದಿದ್ದಾರೆ.

ಅವರಿಗಾಗಿ ಮತ್ತು ತಮಗಾಗಿ ಹೊಸ ನಶೆಯನ್ನು ಹುಟ್ಟಿಸಿಕೊಂಡಿದ್ದಾರೆ.

 

ಇದಿಷ್ಟರ ನಡುವೆ , ಆಮಲು ಇಳಿದ ಏಕಾಂತದ ಕ್ಷಣದಲ್ಲಿ

ನನ್ನ ಬೆವರಿನ ವಾಸನೆಗಳು ಅವರ ಮೈಯಲ್ಲಿ ಉಕ್ಕುತ್ತದೆ.

 

ಮತ್ತು, ಏಕಾಂತದಲ್ಲಿ ನನ್ನ ಮಾತನ್ನು ಧೇನಿಸಿ ಸುಖಿಸುವಾಗ

ಹಳೆಯ ಮತ್ತು ಹೊಸ ನಶೆಗಳ ನಡುವೆ ಕಂದರ ಕಾಣಿಸುತ್ತದೆ.

 

ಅದರ ಜೊತೆಗೆ ನಾನು ಬೇಕೆನ್ನುವ ಯಾಚನೆ ಅವರಿಗೆ

ಈ ರೀತಿಯ ಯಾಚನೆಯಿಲ್ಲದೆ ನಾನು ನನ್ನ ಲೋಕದಲ್ಲಿ ಸುಖಿಸುತ್ತಾ ವ್ಯಸ್ತನಾಗಿರುವಾಗ-

 

ನಾನಿಲ್ಲದ ಬದುಕಿನಲ್ಲಿ ನನ್ನ ನಶೆಗಳು ಅವರನ್ನು ಕುಡಿಯದೆ

ಹಳೇ ಪ್ರೆಯಸಿಯರ ಈಗಿನ ನಶೆಗಳು ಅವರನ್ನು ಸುಖವಾಗಿಡಲಿ.

%d bloggers like this: