ದೇಶ ಧ್ವಜಕ್ಕೆ ಹೀಗೊಂದು ಅವಮಾನ

ಚಕ್ರದ ಕೆಸರೆಲ್ಲಾ ಧ್ವಜದಲ್ಲಿ

ಗುರುತಿಸಿದಲ್ಲಿ ಕೆಸರು ಮೆತ್ತಿಕೊಂಡಿತ್ತು

ಇವರೇ ಹೀಗೆ ಅವಮಾನಿಸಿದವರು

ಇವರೇ ಹೀಗೆ ಅವಮಾನಿಸಿದವರು

ಎಲ್ಲೆಲ್ಲೋ ಹೋಗಿ ಬಂದು ಮಂಗಳೂರಿನ ಜ್ಯೋತಿ ಸಿನಿಮಾ ಮಂದಿರದ ಮುಂದೆ ನಿಂತಿದ್ದೆ. ಟ್ರಾಫಿಕ್ ಪೋಲಿಸ್ ಇದ್ದಕಿದ್ದಂತೆ ಸ್ಕಾರ್ಪಿಯೋ ಗಾಡಿಯೊಂದನ್ನು ನಿಲ್ಲಿಸಿದನ್ನು ನೋಡಿ ಮುಂದೆ ಬಂದಾಗ, ಬೋನೆಟ್, ಹಿಂದುಗಡೆ ದೇಶದ ದ್ವಜವನ್ನು ಒಳ ತುರುಕಿಸಿಡಲಾಗಿತ್ತು. ಆದರೆ ಅದರ ಚಿತ್ರ ಸೆರೆ ಹಿಡಿಯಲಾಗಲಿಲ್ಲ. ಒಂದು ಪಾರ್ಶ್ವದ್ದು ಸಾಧ್ಯವಾಯಿತು.
ದೇಶ ಪ್ರೇಮವೋ? ಉದ್ದೇಶ ಪೂರಿತ ಅವಮಾನವೋ? ಜನ ಮಾತಾನಾಡುತ್ತಿದ್ದರು. ಸಮಾಧಾನದ ವಿಚಾರ. ಕಾರನ್ನು ಸೀಜ಼್ ಮಾಡಿದ್ದು.

ಸ್ವಾತಂತ್ರ್ಯ ದಿನ ಕುಡಿತದ ದಿನವಾಗದಿರಲಿ

ಸ್ವಾತಂತ್ರ್ಯ ದಿನವೆಂದ ತಕ್ಷಣ ನನಗೆ ನೆನಪಾಗುವುದು ನನ್ನ ಬಾಲ್ಯದ ದೇವದಾನ ಹಾಗೂ ಪೂರ್ಣಪ್ರಜ್ಞ ಪ್ರೌಢ ಶಾಲೆಯ ದಿನಗಳು. ಮುದ್ದೆಯಾದ ಅಂಗಿ ಬಟ್ಟೆಗಳಿಗೆ ಕೆಂಡದ ಇಸ್ತ್ರಿ ಪೆಟ್ಟಿಗೆಯಲ್ಲಿ ಇಸ್ತ್ರಿ ಹಾಕಿ ಕಡಕ್ ಆಗಿ, ಉತ್ಸಾಹದಿಂದ ಸಂಭ್ರಮದಲ್ಲಿ ಹೊರಡುತ್ತಿದ್ದ ದಿನಗಳು. ಸ್ವಾತಂತ್ರ್ಯ ಅಂದರೆ ಆ ದಿನ ಮಾತ್ರ ದೇಶದ ಬಗ್ಗೆ ಹೆಮ್ಮೆ ಹುಟ್ಟುವುದಲ್ಲ. ಅದು ಪ್ರತಿ ಕ್ಷಣವೂ ನನ್ನಲ್ಲಿ ಉರಿಯುತ್ತಲಿದೆ. ದೇಶಪ್ರೇಮ ಅಂದರೆ ಸರಿಯಾಗಿ ಅರ್ಥವಾಗುವ ಮುನ್ನಾವೇ ಜಾರ್ಜ್ ಎಂಬ ನನ್ನ ಗೆಳೆಯ, ಸೈನ್ಯದಲ್ಲಿರುವ ತನ್ನ ಅಣ್ಣಂದಿರ ಬಗ್ಗೆ ಹೇಳುತ್ತಾ ನಾನು ಮುಂದೊಂದು ದಿನ ಸೈನ್ಯ ಸೇರುವೆನೆಂದು ಹೇಳುತ್ತಾ, ದೇಶಪ್ರೇಮವನ್ನು ಸೈನಿಕರ ಬಗ್ಗೆ ಹೇಳುತ್ತಾ ಚಿಗುರಿಸಿದ (ಹೇಳಿದ ಹಾಗೆ ಇಂದು ಸೈನ್ಯದಲ್ಲಿದ್ದಾನೆ). ಮಿಕ್ಕಿದ್ದು ಎಲೀಜಾ ಟೀಚರರ ಮೂಲಕ.
ನಾನು ಕೂಲಿಯಾಗಿ ಕೆಲಸ ಮಾಡುವಾಗ ಇರಲಿ, ಅಲೆಮಾರಿಯಾಗಿ ಬದುಕುತ್ತಿರುವಾಗ ಇರಲಿ, ಅಥವಾ ಈಗ ಸ್ನಾತಕೊತ್ತರ ಮುಗಿಸಿದ ಹೊತ್ತಿನಲ್ಲಿ ಇರಲಿ ಸ್ವಾತಂತ್ರ್ಯ ದಿನವನ್ನು ತಪ್ಪಿಸಿಕೊಂಡವನಲ್ಲ. ಆ ದಿನ ರಾಷ್ಟ್ರ‍ೀಯ ಗೀತೆ ಹಾಡುತ್ತಾ, ನನ್ನ ದೇಶದ ಧ್ವಜಕ್ಕೆ ಕೈ ಮುಗಿಯದೆ (ಸೆಲ್ಯೂಟ್) ಇದ್ದರೆ ನನ್ನ ಮನಸ್ಸಿಗೆ ಶಾಂತಿ ಇರದು. ಇದು ನನ್ನ ದೇಶದ ಬಗ್ಗೆ ಇರುವ ಕೊಡುವ ಗೌರವ.
ಮೇಲಿನದ್ದು ನನ್ನ ಬಗ್ಗೆಯ ಮಾತಾಯಿತು.
ವಿಚಾರ ಹೊರಳಿಸೋಣ. ಈ ದಿನ ಸ್ವಾತಂತ್ರ್ಯ ಅಂದರೆ ಜನ ಕೊಡುವ ವ್ಯಾಖ್ಯಾನ ನನ್ನನ್ನು ನಿಜವಾಗಿ ಕಂಗೆಡಿಸುತ್ತದೆ (ಕೆಲವರು ಮಾತ್ರ). ಸ್ವಾತಂತ್ರ್ಯವೆಂದರೆ ಕುಡಿಯಲು ಸಿಕ್ಕ ದಿನ… ಹಸಿರು ನಿಶಾನೆ… ಎಲ್ಲದಕ್ಕೂ. ಇದು ನಾನು ಹೇಳುತ್ತಿರುವುದು ಅವಿಧ್ಯಾವಂತರ ಬಗ್ಗೆಗಲ್ಲ. ವಿಧ್ಯಾವಂತರ ಬಗ್ಗೆ. ಕರಾವಳಿಯಲ್ಲಂತೂ ಕುಡಿದು ಬೈಕಿನಲ್ಲಿ ಓಲಾಡುತ್ತಾ ಹೋಗುವ ಜನರ ಸಂಖ್ಯೆ ಅಧಿಕವಾಗುತ್ತಿದೆ. ಸ್ವಾತಂತ್ರ್ಯವೆಂದರೆ ಜಾಲಿಯಾಗಿ ಇರುವುದೆಂದು ತಿಳಿದ ಮಂದಿ ಪಣಂಬೂರ್ ಬೀಚಿನಲ್ಲಿ, ಕೆ.ಆರ್.ಇ.ಸಿ ಲೈಟ್ ಹೌಸಿನಲ್ಲಿ, ಕಾಪು ಲೈಟ್ ಹೌಸಿನಲ್ಲಿ ಕುಡಿದು ಹಾಯಾಗಿರುವುದನ್ನು ಕಾಣಬಹುದು. ಕೆಲವರಂತೂ ಸ್ವಾತಂತ್ರ್ಯದಂದು ಹೊರಗೆ ವಾಹನದಲ್ಲಿ ಹೋಗುವುದು ಬೇಡ, ಅಪಾಯ. ಮನೆಯಲ್ಲೇ ಕುಡಿದು ಮಲಗುವ ಅನ್ನುವ ವಿಚಾರವಂತರು. ನಿಜವಾಗಿಯೂ ಇದು ಸ್ವಾತಂತ್ರ್ಯವೇ??? ನಮ್ಮ ಹಿರಿಯ ತ್ಯಾಗ, ಹೋರಾಟ ಈ ಪೀಳಿಗೆಯನ್ನು ಮುಟ್ಟಿಲ್ಲವೇ??
ಇದೇ ಆದಿತ್ಯವಾರ ನಾವು ಗೆಳೆಯರೆಲ್ಲಾ ಒಟ್ಟಾಗಿದ್ದೆವು. ಜೋರು ಮಾತಿನ ಚರ್ಚೆಯಾಗುತ್ತಿತ್ತು. ಎಲ್ಲರಿಗೂ ಒಂದೊಂದು ಸಾವಿರ ತಲೆಗಂದಾಯ!! ನಡುವಿನಲ್ಲಿ ಬಂದ ನಾನು “ಏನು ವಿಶೇಷವೆಂದೆ?.  “ಸ್ವಾತಂತ್ರ್ಯ” ಅಂದರು. ಏನಾದರೂ ಶಾಲೆ ಮಕ್ಕಳಿಗೆ ಕೊಡುವುದರ ಬಗ್ಗೆ ಇರಬಹುದು ಅಂದುಕೊಂಡ ನನ್ನ ಕಲ್ಪನೆ ಸುಳ್ಳಾಗಿತ್ತು. ಅದೊಂದು ಕುಡಿತಕ್ಕೆ, ಮೋಜಿಗೆ ಒಬ್ಬೊಬ್ಬರಿಗೆ ವಿದಿಸಿದ ಹಣವಾಗಿತ್ತು. ಎಂಟು ಜನರ ಗುಂಪಿನಿಂದ ಎಂಟು ಸಾವಿರ!!!!
“ಸರಿ. ನನಗೆ ಬರಲಾಗುವುದಿಲ್ಲ ಎಂದೆ. ಬೇರೆ ದಿನವಾದರೆ ಕ್ಷಮಿಸಿಯೆಂದು ಹೇಳುತ್ತಿದ್ದೆ. ದೇಶದ ಬಗ್ಗೆ ಗೌರವ ಇಲ್ಲದವರಿಗೆ ಅದು ಅಗತ್ಯವಿಲ್ಲವೆನಿಸಿತು. “ಅದು ಹೇಗೆ ಸಾಧ್ಯ? ನಾವು ಯಾವಗಲೂ ಒಟ್ಟಿಗೆ ಗುಂಡು ಪಾರ್ಟಿ ಮಾಡುವುದಲ್ಲವೇ?? ಅಂದರು. ಹಾ! ಹೌದು
ಆದರೆ ಈ ವಿಚಾರದಲ್ಲಿ ಸಾಧ್ಯವಿಲ್ಲವೆಂದೆ. ಯಾಕೆಂದು ಕೇಳಿದಾಗ ನಾ ಹೇಳಿದೆ ಸ್ವಾತಂತ್ರ್ಯ ದಿನದಂದು ರಾಷ್ಟ್ರ ಧ್ವಜ,  ರಾಷ್ಟ್ರ‍ೀಯ ಗೀತೆಯೊಂದಿಗೆ ನಮಸ್ಕಾರಿಸದೆ ಇರಲು ನನ್ನಿಂದ ಸಾಧ್ಯವಿಲ್ಲವೆಂದೆ. ಆ ಹೊತ್ತಿಗೆ ಈಗಷ್ಟೇ ಇಂಜನಿಯರಿಂಗ್ ಮಾಡುತ್ತಿರುವ ಗೆಳೆಯನೆಂದ ದೇಶ ಭಕ್ತಿ ಮನಸ್ಸಿನಲ್ಲಿದ್ದರೆ ಸಾಕು ತೋರಿಸ ಬೇಕೆಂದಿಲ್ಲವೆಂದು. ನೀನು ದೇವರಿಗೆ ಯಾವತ್ತಾದರೂ ಕೈ ಮುಗಿಯುತ್ತೀಯಾ? ಕೇಳಿದೆ. ಹಾದೆಂದ ಭಕ್ತಿ ಮನಸ್ಸಿನಲ್ಲಿದ್ದರೆ ಸಾಕು ತೋರಿಸಬೇಕಿಲ್ಲ: ದೇವಸ್ಥಾನಕ್ಕೂ ಹೋಗುವ ಅಗತ್ಯವಿಲ್ಲವೆಂದೆ. ಅಷ್ಟೂ ಹೇಳಿದ್ದೆ ತಡ ಶುರುವಾಯಿತು ಚರ್ಚೆ.
ಇಷ್ಟೆಲ್ಲಾ ಮಾತನಾಡಿದ್ದು ಅವಿಧ್ಯಾವಂತರಲ್ಲ. ಎಂ.ಬಿ.ಎ, ಪದವಿ, ಇಂಜಿನಿಯರಿಂಗ್ ಕಲಿತ ಹುಡುಗರು. ಅವಿಧ್ಯಾವಂತರು ಕೂಡಾ ತಮ್ಮೆಲ್ಲಾ ಕೆಲಸ ಬಿಟ್ಟು ಆ ದಿನ ಉಪಸ್ಥಿತವಿರುವಾಗ ಯುವ ನಮ್ಮ ಯುವಜನತೆ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಜನತೆ ದೇಶದ ಬಗ್ಗೆ ತಳೆಯುತ್ತಿರುವ ದೋರಣೆ ಬಗ್ಗೆ ದಿಗಿಲಾಗುತ್ತಿದೆ. ಉಗ್ರರು ಆಕ್ರಮಣ ಮಾಡಿದಾಗ ಉದ್ದೀಪನೆಯಾಗುವಾಗ ದೇಶ ಪ್ರೇಮ ಈ ವಿಚಾರದಲ್ಲಿ ಯಾಕಾಗುವುದಿಲ್ಲ? ನಮ್ಮ ದೇಶದ ದಮನಿತರನ್ನು, ಶೋಷಿತರನ್ನು ದಾರಿಗೆ ತರುವ ವಿಚಾರದಲ್ಲಿ ಯಾಕಾಗುವುದಿಲ್ಲ?
ಈ ಎಂಟು ಸಾವಿರದಲ್ಲಿ ಯಾರಾದರೂ ಬಡ ಮಕ್ಕಳಿಗೆ ಹಂಚಿದರೆ ಆ ಮೂಲಕವಾದರೂ ದೇಶದ ಉನ್ನತಿಗೆ ನಮ್ಮ ಪಾಲನ್ನು ಕೊಡುತ್ತಾ ದೇಶದ ಬಗ್ಗೆ ಗೌರವ ಸಲ್ಲಿಸಿದಂತಾಗುತ್ತದೆ.
ದೇಶ ಪ್ರೇಮ ಅನ್ನುವುದು ಒಂದು ದಿನದ್ದಲ್ಲವಾದರೂ, ಅದನ್ನು ತೋರಿಸಿಕೊಳ್ಳುವುದು ಅಲ್ಲವಾದರೂ ತಮ್ಮ ಅತ್ಮರ್ಪಣೆ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಿಗೆ ಸಲ್ಲಿಸುವ ಗೌರವ ಹಾಗೂ ದೇಶಕ್ಕೂ.
ನಾನು ನಿಮ್ಮ ಯಾವ ಪಾರ್ಟಿಗೆ ಇಲ್ಲವೆಂದು ಖಚಿತಪಡಿಸಿದ್ದೇನೆ. ನನ್ನ ಬಾಲ್ಯದ ದೇವದಾನ ಶಾಲೆಯಲ್ಲಿ (ಬಾಳೆಹೊನ್ನೂರು ಸಮೀಪ) ನನ್ನ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲು ಹೊರಡುತ್ತಿದ್ದೇನೆ….
ನಾವೆಲ್ಲಾ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳೊಣ. ಅದಕ್ಕಾಗಿ ಕಂಕಣ ಬದ್ದರಾಗೋಣ. ಪಾರ್ಟಿಗೆ ಖರ್ಚುಮಾಡುವ ಹಣವನ್ನು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ (ಸಮಾಜ ಸೇವೆಗೆ ವಿನಿಯೋಗಿಸೋಣ)
ನಾನು ಈ ಯೋಚನೆಯಲ್ಲಿದ್ದೇನೆ. ಇನ್ನೂ ನೀವು
ಮೇರಾ ಭಾರತ್ ಮಹಾನ್.
ವಂದೆ ಮಾತರಂ

imagesಸ್ವಾತಂತ್ರ್ಯ ದಿನವೆಂದ ತಕ್ಷಣ ನನಗೆ ನೆನಪಾಗುವುದು ನನ್ನ ಬಾಲ್ಯದ ದೇವದಾನ ಹಾಗೂ ಪೂರ್ಣಪ್ರಜ್ಞ ಪ್ರೌಢ ಶಾಲೆಯ ದಿನಗಳು. ಮುದ್ದೆಯಾದ ಅಂಗಿ ಬಟ್ಟೆಗಳಿಗೆ ಕೆಂಡದ ಇಸ್ತ್ರಿ ಪೆಟ್ಟಿಗೆಯಲ್ಲಿ ಇಸ್ತ್ರಿ ಹಾಕಿ ಕಡಕ್ ಆಗಿ, ಉತ್ಸಾಹದಿಂದ ಸಂಭ್ರಮದಲ್ಲಿ ಹೊರಡುತ್ತಿದ್ದ ದಿನಗಳು. ಸ್ವಾತಂತ್ರ್ಯ ಅಂದರೆ ಆ ದಿನ ಮಾತ್ರ ದೇಶದ ಬಗ್ಗೆ ಹೆಮ್ಮೆ ಹುಟ್ಟುವುದಲ್ಲ. ಅದು ಪ್ರತಿ ಕ್ಷಣವೂ ನನ್ನಲ್ಲಿ ಉರಿಯುತ್ತಲಿದೆ. ದೇಶಪ್ರೇಮ ಅಂದರೆ ಸರಿಯಾಗಿ ಅರ್ಥವಾಗುವ ಮುನ್ನಾವೇ ಜಾರ್ಜ್ ಎಂಬ ನನ್ನ ಗೆಳೆಯ, ಸೈನ್ಯದಲ್ಲಿರುವ ತನ್ನ ಅಣ್ಣಂದಿರ ಬಗ್ಗೆ ಹೇಳುತ್ತಾ ನಾನು ಮುಂದೊಂದು ದಿನ ಸೈನ್ಯ ಸೇರುವೆನೆಂದು ಹೇಳುತ್ತಾ, ದೇಶಪ್ರೇಮವನ್ನು ಸೈನಿಕರ ಬಗ್ಗೆ ಹೇಳುತ್ತಾ ಚಿಗುರಿಸಿದ (ಹೇಳಿದ ಹಾಗೆ ಇಂದು ಸೈನ್ಯದಲ್ಲಿದ್ದಾನೆ). ಮಿಕ್ಕಿದ್ದು ಎಲೀಜಾ ಟೀಚರರ ಮೂಲಕ.

images (1)ನಾನು ಕೂಲಿಯಾಗಿ ಕೆಲಸ ಮಾಡುವಾಗ ಇರಲಿ, ಅಲೆಮಾರಿಯಾಗಿ ಬದುಕುತ್ತಿರುವಾಗ ಇರಲಿ, ಅಥವಾ ಈಗ ಸ್ನಾತಕೊತ್ತರ ಮುಗಿಸಿದ ಹೊತ್ತಿನಲ್ಲಿ ಇರಲಿ ಸ್ವಾತಂತ್ರ್ಯ ದಿನವನ್ನು ತಪ್ಪಿಸಿಕೊಂಡವನಲ್ಲ. ಆ ದಿನ ರಾಷ್ಟ್ರ‍ೀಯ ಗೀತೆ ಹಾಡುತ್ತಾ, ನನ್ನ ದೇಶದ ಧ್ವಜಕ್ಕೆ ಕೈ ಮುಗಿಯದೆ (ಸೆಲ್ಯೂಟ್) ಇದ್ದರೆ ನನ್ನ ಮನಸ್ಸಿಗೆ ಶಾಂತಿ ಇರದು. ಇದು ನನ್ನ ದೇಶದ ಬಗ್ಗೆ ಇರುವ ಕೊಡುವ ಗೌರವ.

ಮೇಲಿನದ್ದು ನನ್ನ ಬಗ್ಗೆಯ ಮಾತಾಯಿತು.

ವಿಚಾರ ಹೊರಳಿಸೋಣ. ಈ ದಿನ ಸ್ವಾತಂತ್ರ್ಯ ಅಂದರೆ ಜನ ಕೊಡುವ ವ್ಯಾಖ್ಯಾನ ನನ್ನನ್ನು ನಿಜವಾಗಿ ಕಂಗೆಡಿಸುತ್ತದೆ (ಕೆಲವರು ಮಾತ್ರ). ಸ್ವಾತಂತ್ರ್ಯವೆಂದರೆ ಕುಡಿಯಲು ಸಿಕ್ಕ ದಿನ… ಹಸಿರು ನಿಶಾನೆ… ಎಲ್ಲದಕ್ಕೂ. ಇದು ನಾನು ಹೇಳುತ್ತಿರುವುದು ಅವಿಧ್ಯಾವಂತರ ಬಗ್ಗೆಗಲ್ಲ. ವಿಧ್ಯಾವಂತರ ಬಗ್ಗೆ. ಕರಾವಳಿಯಲ್ಲಂತೂ ಕುಡಿದು ಬೈಕಿನಲ್ಲಿ ಓಲಾಡುತ್ತಾ ಹೋಗುವ ಜನರ ಸಂಖ್ಯೆ ಅಧಿಕವಾಗುತ್ತಿದೆ. ಸ್ವಾತಂತ್ರ್ಯವೆಂದರೆ ಜಾಲಿಯಾಗಿ ಇರುವುದೆಂದು ತಿಳಿದ ಮಂದಿ ಪಣಂಬೂರ್ ಬೀಚಿನಲ್ಲಿ, ಕೆ.ಆರ್.ಇ.ಸಿ ಲೈಟ್ ಹೌಸಿನಲ್ಲಿ, ಕಾಪು ಲೈಟ್ ಹೌಸಿನಲ್ಲಿ ಕುಡಿದು ಹಾಯಾಗಿರುವುದನ್ನು ಕಾಣಬಹುದು. ಕೆಲವರಂತೂ ಸ್ವಾತಂತ್ರ್ಯದಂದು ಹೊರಗೆ ವಾಹನದಲ್ಲಿ ಹೋಗುವುದು ಬೇಡ, ಅಪಾಯ. ಮನೆಯಲ್ಲೇ ಕುಡಿದು ಮಲಗುವ ಅನ್ನುವ ವಿಚಾರವಂತರು. ನಿಜವಾಗಿಯೂ ಇದು ಸ್ವಾತಂತ್ರ್ಯವೇ??? ನಮ್ಮ ಹಿರಿಯ ತ್ಯಾಗ, ಹೋರಾಟ ಈ ಪೀಳಿಗೆಯನ್ನು ಮುಟ್ಟಿಲ್ಲವೇ??

ಇದೇ ಆದಿತ್ಯವಾರ ನಾವು ಗೆಳೆಯರೆಲ್ಲಾ ಒಟ್ಟಾಗಿದ್ದೆವು. ಜೋರು ಮಾತಿನ ಚರ್ಚೆಯಾಗುತ್ತಿತ್ತು. ಎಲ್ಲರಿಗೂ ಒಂದೊಂದು ಸಾವಿರ ತಲೆಗಂದಾಯ!! ನಡುವಿನಲ್ಲಿ ಬಂದ ನಾನು “ಏನು ವಿಶೇಷವೆಂದೆ?.  “ಸ್ವಾತಂತ್ರ್ಯ” ಅಂದರು. ಏನಾದರೂ ಶಾಲೆ ಮಕ್ಕಳಿಗೆ ಕೊಡುವುದರ ಬಗ್ಗೆ ಇರಬಹುದು ಅಂದುಕೊಂಡ ನನ್ನ ಕಲ್ಪನೆ ಸುಳ್ಳಾಗಿತ್ತು. ಅದೊಂದು ಕುಡಿತಕ್ಕೆ, ಮೋಜಿಗೆ ಒಬ್ಬೊಬ್ಬರಿಗೆ ವಿದಿಸಿದ ಹಣವಾಗಿತ್ತು. ಎಂಟು ಜನರ ಗುಂಪಿನಿಂದ ಎಂಟು ಸಾವಿರ!!!!

“ಸರಿ. ನನಗೆ ಬರಲಾಗುವುದಿಲ್ಲ ಎಂದೆ. ಬೇರೆ ದಿನವಾದರೆ ಕ್ಷಮಿಸಿಯೆಂದು ಹೇಳುತ್ತಿದ್ದೆ. ದೇಶದ ಬಗ್ಗೆ ಗೌರವ ಇಲ್ಲದವರಿಗೆ ಅದು ಅಗತ್ಯವಿಲ್ಲವೆನಿಸಿತು. “ಅದು ಹೇಗೆ ಸಾಧ್ಯ? ನಾವು ಯಾವಗಲೂ ಒಟ್ಟಿಗೆ ಗುಂಡು ಪಾರ್ಟಿ ಮಾಡುವುದಲ್ಲವೇ?? ಅಂದರು. ಹಾ! ಹೌದು

ಆದರೆ ಈ ವಿಚಾರದಲ್ಲಿ ಸಾಧ್ಯವಿಲ್ಲವೆಂದೆ. ಯಾಕೆಂದು ಕೇಳಿದಾಗ ನಾ ಹೇಳಿದೆ ಸ್ವಾತಂತ್ರ್ಯ ದಿನದಂದು ರಾಷ್ಟ್ರ ಧ್ವಜ,  ರಾಷ್ಟ್ರ‍ೀಯ ಗೀತೆಯೊಂದಿಗೆ ನಮಸ್ಕಾರಿಸದೆ ಇರಲು ನನ್ನಿಂದ ಸಾಧ್ಯವಿಲ್ಲವೆಂದೆ. ಆ ಹೊತ್ತಿಗೆ ಈಗಷ್ಟೇ ಇಂಜನಿಯರಿಂಗ್ ಮಾಡುತ್ತಿರುವ ಗೆಳೆಯನೆಂದ ದೇಶ ಭಕ್ತಿ ಮನಸ್ಸಿನಲ್ಲಿದ್ದರೆ ಸಾಕು ತೋರಿಸ ಬೇಕೆಂದಿಲ್ಲವೆಂದು. ನೀನು ದೇವರಿಗೆ ಯಾವತ್ತಾದರೂ ಕೈ ಮುಗಿಯುತ್ತೀಯಾ? ಕೇಳಿದೆ. ಹಾದೆಂದ ಭಕ್ತಿ ಮನಸ್ಸಿನಲ್ಲಿದ್ದರೆ ಸಾಕು ತೋರಿಸಬೇಕಿಲ್ಲ: ದೇವಸ್ಥಾನಕ್ಕೂ ಹೋಗುವ ಅಗತ್ಯವಿಲ್ಲವೆಂದೆ. ಅಷ್ಟೂ ಹೇಳಿದ್ದೆ ತಡ ಶುರುವಾಯಿತು ಚರ್ಚೆ.

ಇಷ್ಟೆಲ್ಲಾ ಮಾತನಾಡಿದ್ದು ಅವಿಧ್ಯಾವಂತರಲ್ಲ. ಎಂ.ಬಿ.ಎ, ಪದವಿ, ಇಂಜಿನಿಯರಿಂಗ್ ಕಲಿತ ಹುಡುಗರು. ಅವಿಧ್ಯಾವಂತರು ಕೂಡಾ ತಮ್ಮೆಲ್ಲಾ ಕೆಲಸ ಬಿಟ್ಟು ಆ ದಿನ ಉಪಸ್ಥಿತವಿರುವಾಗ ಯುವ ನಮ್ಮ ಯುವಜನತೆ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಜನತೆ ದೇಶದ ಬಗ್ಗೆ ತಳೆಯುತ್ತಿರುವ ದೋರಣೆ ಬಗ್ಗೆ ದಿಗಿಲಾಗುತ್ತಿದೆ. ಉಗ್ರರು ಆಕ್ರಮಣ ಮಾಡಿದಾಗ ಉದ್ದೀಪನೆಯಾಗುವಾಗ ದೇಶ ಪ್ರೇಮ ಈ ವಿಚಾರದಲ್ಲಿ ಯಾಕಾಗುವುದಿಲ್ಲ? ನಮ್ಮ ದೇಶದ ದಮನಿತರನ್ನು, ಶೋಷಿತರನ್ನು ದಾರಿಗೆ ತರುವ ವಿಚಾರದಲ್ಲಿ ಯಾಕಾಗುವುದಿಲ್ಲ?

ಈ ಎಂಟು ಸಾವಿರದಲ್ಲಿ ಯಾರಾದರೂ ಬಡ ಮಕ್ಕಳಿಗೆ ಹಂಚಿದರೆ ಆ ಮೂಲಕವಾದರೂ ದೇಶದ ಉನ್ನತಿಗೆ ನಮ್ಮ ಪಾಲನ್ನು ಕೊಡುತ್ತಾ ದೇಶದ ಬಗ್ಗೆ ಗೌರವ ಸಲ್ಲಿಸಿದಂತಾಗುತ್ತದೆ.

ದೇಶ ಪ್ರೇಮ ಅನ್ನುವುದು ಒಂದು ದಿನದ್ದಲ್ಲವಾದರೂ, ಅದನ್ನು ತೋರಿಸಿಕೊಳ್ಳುವುದು ಅಲ್ಲವಾದರೂ ತಮ್ಮ ಅತ್ಮರ್ಪಣೆ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಿಗೆ ಸಲ್ಲಿಸುವ ಗೌರವ ಹಾಗೂ ದೇಶಕ್ಕೂ.

ನಾನು ನಿಮ್ಮ ಯಾವ ಪಾರ್ಟಿಗೆ ಇಲ್ಲವೆಂದು ಖಚಿತಪಡಿಸಿದ್ದೇನೆ. ನನ್ನ ಬಾಲ್ಯದ ದೇವದಾನ ಶಾಲೆಯಲ್ಲಿ (ಬಾಳೆಹೊನ್ನೂರು ಸಮೀಪ) ನನ್ನ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲು ಹೊರಡುತ್ತಿದ್ದೇನೆ….

ನಾವೆಲ್ಲಾ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳೊಣ. ಅದಕ್ಕಾಗಿ ಕಂಕಣ ಬದ್ದರಾಗೋಣ. ಪಾರ್ಟಿಗೆ ಖರ್ಚುಮಾಡುವ ಹಣವನ್ನು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ (ಸಮಾಜ ಸೇವೆಗೆ ವಿನಿಯೋಗಿಸೋಣ)

ನಾನು ಈ ಯೋಚನೆಯಲ್ಲಿದ್ದೇನೆ. ಇನ್ನೂ ನೀವು

ಮೇರಾ ಭಾರತ್ ಮಹಾನ್.

ವಂದೆ ಮಾತರಂ

ಏರಲಿ, ಹಾರಲಿ ನಮ್ಮ ಭಾವುಟ

ಏರಲಿ, ಹಾರಲಿ ನಮ್ಮ ಭಾವುಟ

%d bloggers like this: