ಮೈಗಂಟಿದ ಕಲೆಯನ್ನು ಹಿಂಭಾಲಿಸುವ ಕಣ್ಣುಗಳು

ನಿನ್ನೆ ರಾತ್ರಿ ಹೀಗೆ ಬಂದವರು ದೋಚಿದರು
ನಗ, ನಾಣ್ಯ ಅಷ್ಟೆಯಲ್ಲ
ಸಾಮಾನು, ಅದೀದು, ನಿತ್ಯದ ಸರಕು
ಮತ್ಯಾರದ್ದೋ ಜೀವನ.
ಸೂರೆ ಹೋದವು-
ಕನಸುಗಳು ಉಕ್ಕೇರಿದ ಗಲ್ಲೆಗಳು
ಉಗ್ರಾಣಗಳು, ತಿಜೋರಿಗಳು
ಯಾರೆಂದು ಹೇಳದ ರಾತ್ರಿಯಲ್ಲಿ.
ಹೋದವರಿಗೆ ಉಕ್ಕಿದ ಹೊಳೆಯಲ್ಲಿ ಸರ್ವಸ್ವವೂ ಹೋದಂತೆ
ಕೆಲವರಿಗೆ ಹಸಿಹಸಿಯಾಗಿ ಉಳಿಯುವ ಖುಷಿಗಳಾದವು.
ಅವರಿವರ ಮಾತಿನಲ್ಲಿ ಗುಸುಪಿಸು
ನಿಂತವರು, ನಡೆದವರು, ದಿಟ್ಟಿಸಿದವರು
ನಕ್ಕವರು, ವಿಷಾದಿಸಿದವರು
ಎಲ್ಲರ ಮೇಲೊಂದು ಹಳದಿ ಕಣ್ಣು.
ಅವನು ಎಂದೋ ಹಾದಿ ತಪ್ಪಿ
ನೊಂದು ಬೆಂದು ಅನ್ನದಂತೆ ಹಗುರವಾದವನು.
ಅವನ ಪ್ರೇಯಸಿಯ ಕೈ ನೇವರಿಸುವ ಕೈಯಲ್ಲಿ
ಬದುಕು ಪಡೆದು, ಕೈ ರೇಖೆಯಲ್ಲಿ
ತನ್ನ ದಾರಿ ಕಂಡು ಕೊಂಡವನು.
ಎಂದೂ ಮಾತನಾಡದ ಬಾಯಿಗಳು ಮಾತನಾಡುತ್ತವೆ
ಅನುಮಾನದ ಮಾತಿನ ವಿಚಾರಣೆಗಳಾಗಿ
ನೂರು ಕಣ್ಣುಗಳು ಅವನ ಹಿಂಭಾಲಿಸುತ್ತವೆ
ಅವನ ಮೈಗಂಟಿದ ಕಲೆಯನ್ನು ಸದಾ ನೋಡುವಂತೆ.
ಅವನ ಮನಸ್ಸು ಚೀರುವುದು-
ನಿಮ್ಮ ಅನುಮಾನ ನನ್ನ ಬಗೆಯಲ್ಲ
ನನ್ನವಳ ಪ್ರೀತಿಯ ಬಗ್ಗೆ
ಅಪರಾಧ ಲೋಕದಿಂದ ಹಿಂದೆ ಸರಿದರು ಸಮಾಜದ ಕಣ್ಣುಗಳು ಪೂರ್ವಾಗ್ರಹದ ದೃಷ್ಟಿಯಿಂದ ತನ್ನನ್ನು ನೋಡುತ್ತಿವೆಯೆಂದು ನಾನು ಅಪರಾಧಿಗಳ ಬಗ್ಗೆ ಸಣ್ಣ ಅಧ್ಯಯನ ನಡೆಸುವಾಗ ಹೇಳಿಕೊಂಡ ಮನುಷ್ಯನೊಬ್ಬನಿಂದ ಪ್ರೇರಿತನಾಗಿ ಬರೆದ ಕವನ

ನಿನ್ನೆ ರಾತ್ರಿ ಹೀಗೆ ಬಂದವರು ದೋಚಿದರು

ನಗ, ನಾಣ್ಯ ಅಷ್ಟೆಯಲ್ಲ

ಸಾಮಾನು, ಅದೀದು, ನಿತ್ಯದ ಸರಕು

ಮತ್ಯಾರದ್ದೋ ಜೀವನ.


ಸೂರೆ ಹೋದವು-

ಕನಸುಗಳು ಉಕ್ಕೇರಿದ ಗಲ್ಲೆಗಳು

ಉಗ್ರಾಣಗಳು, ತಿಜೋರಿಗಳು

ಯಾರೆಂದು ಹೇಳದ ರಾತ್ರಿಯಲ್ಲಿ.


ಹೋದವರಿಗೆ ಉಕ್ಕಿದ ಹೊಳೆಯಲ್ಲಿ ಸರ್ವಸ್ವವೂ ಹೋದಂತೆ

ಕೆಲವರಿಗೆ ಹಸಿಹಸಿಯಾಗಿ ಉಳಿಯುವ ಖುಷಿಗಳಾದವು.

ಅವರಿವರ ಮಾತಿನಲ್ಲಿ ಗುಸುಪಿಸು

ನಿಂತವರು, ನಡೆದವರು, ದಿಟ್ಟಿಸಿದವರು

ನಕ್ಕವರು, ವಿಷಾದಿಸಿದವರು

ಎಲ್ಲರ ಮೇಲೊಂದು ಹಳದಿ ಕಣ್ಣು.


ನಾನು ಎಂದೋ ಹಾದಿ ತಪ್ಪಿ

ನೊಂದು ಬೆಂದು ಅನ್ನದಂತೆ ಹಗುರವಾದವನು.

ನನ್ನ ಪ್ರೇಯಸಿಯ ಕೈ ನೇವರಿಸುವ ಕೈಯಲ್ಲಿ

ಬದುಕು ಪಡೆದು, ಕೈ ರೇಖೆಯಲ್ಲಿ

ನನ್ನ ದಾರಿ ಕಂಡು ಕೊಂಡವನು.


ಎಂದೂ ಮಾತನಾಡದ ಬಾಯಿಗಳೀಗ  ಮಾತನಾಡುತ್ತವೆ

ಅನುಮಾನದ ಮಾತಿನ ವಿಚಾರಣೆಗಳಾಗಿ

ನೂರು ಕಣ್ಣುಗಳು ನನ್ನ ಹಿಂಭಾಲಿಸಿ

ನನ್ನ ಮೈಗಂಟಿದ ಕಲೆಯನ್ನು ಸದಾ ನೋಡುತ್ತಲಿರುತ್ತವೆ.


ನನ್ನ ಮನಸ್ಸು ಚೀರುವುದು-

ನಿಮ್ಮ ಅನುಮಾನ ನನ್ನ ಬಗೆಯಲ್ಲ

ನನ್ನವಳ ಪ್ರೀತಿಯ ಬಗ್ಗೆ.

(ಪ್ರೀತಿಗೆ ಬೆಲೆ ಕೊಟ್ಟು ಅಪರಾಧ ಲೋಕದಿಂದ ಹಿಂದೆ ಸರಿದರೂ ಸಮಾಜದ ಕಣ್ಣುಗಳು ಪೂರ್ವಾಗ್ರಹದ ದೃಷ್ಟಿಯಿಂದ ತನ್ನನ್ನು ನೋಡುತ್ತಿವೆಯೆಂದು ನಾನು ಅಪರಾಧಿಗಳ ಬಗ್ಗೆ ಸಣ್ಣ ಅಧ್ಯಯನ ನಡೆಸುವಾಗ ಹೇಳಿಕೊಂಡ ಮನುಷ್ಯನೊಬ್ಬನಿಂದ ಪ್ರೇರಿತನಾಗಿ ಬರೆದ ಕವನ)

%d bloggers like this: