ಸೆಕ್ಸ್ ಉಚಿತ- ಹೀಗೊಂದು ದಾರುಣ ಕತೆ

ಆಕೆ ಪುಟ್ಟ ಊರಿನ ಇಪ್ಪತ್ತೆರಡು ವಯಸ್ಸಿನ ಅಥವಾ ಸಾಲಿನ ಸುಂದರ ಹುಡುಗಿ. ನೋಡುವವರ ಕಣ್ಣನ್ನು ಒಂದು ಸಲ ಹಿಡಿಯುವ ಸೌಂದರ್ಯ ಹೊಂದಿರುವಾಕೆ. ಆಕೆ ಕರೆದವರ, ಬಯಸಿದವರ ಹಾಸಿಗೆಗೆ ಸುಲಭವಾಗಿ ಆಗಿ ಬರುವಳೆಂದರೆ ನನಗೆ ನಂಬಲು ಅಸಾಧ್ಯವಾಗಿತ್ತು. ಅವನು ಹೇಳಿದರೂ ನಾನು ನಂಬಲಿಲ್ಲ. ಅವನು ಮತ್ತೆ ಪ್ರಮಾಣೀಕರಿಸಿದ.
ದಷ್ಟಪುಷ್ಟ ಮೈಕಟ್ಟಿನ ಇವನಿಗೆ ಈ ವಿಚಾರಗಳೆಲ್ಲಾ ಅದು ಹೇಗೆ ಗೊತ್ತಿರುತ್ತದೆ ಎನ್ನುವ ಬಗೆಗಿದ್ದ ಅಚ್ಚರಿ ಅವನ ಬಗ್ಗೆ ತಿಳಿದುಕೊಂಡ ಮೇಲಿಲ್ಲ.ಅವನು ದಿನ ಬೆಳಗ್ಗೆ ಕೆಲಸಕ್ಕೆ ಹೊರಡುವುದು ವಿಧ್ಯಾರ್ಥಿಗಳು ಕಾಲೇಜಿಗೆ ಹೊರಡುವ ಸಮಯದಲ್ಲಿ. ಕೆಲಸಕ್ಕೆ ಹೊರಡುವ ಸಮಯದಲ್ಲಿ. ಈ ರೀತಿಯ ಪಯಣಗಳಲ್ಲಿ ಅವನಿಗೆ ಸುಮಾರು ಹುಡುಗಿಯರ ಪರಿಚಯವಾಗಿ ಹಾಸಿಗೆಗೆ ಬಂದಿರುವುದನ್ನು ಸೊಗಸಾಗಿ ವರ್ಣಿಸುತ್ತಾನೆ. ಅವನು ಅವನ ಪೌರುಷದ ಬಗ್ಗೆ ಮಾತಾಡುವಾಗ ಒಂದು ಕ್ಷಣ ಏಮಾರಿದ ಹುಡುಗಿಯರ ಬಗ್ಗೆ ಅಯ್ಯೋ ಪಾಪ ಅನಿಸುತ್ತೆ. ಕೆಲವು ಹೀಗೆ ತಣ್ಣಗಿರುವ ಮನುಷ್ಯರ ಹಿಂದೆ ಅಡಗಿರುವ ಕ್ರೌರ್ಯ ನನ್ನನ್ನು ಅಲ್ಲಾಡಿಸುತ್ತದೆ. ಇದನ್ನು ಕ್ರೌರ್ಯವೆನ್ನಲೇ? ಹಿಂಸೆಯೆನ್ನಲೇ? ದೌರ್ಜನ್ಯವೆನ್ನಲೇ? ನನ್ನೊಳಗೆ ದ್ವಂದ್ವವಿದೆ. ಅಲ್ಲ ಇವನ್ನೆಲ್ಲಾ ಸಮಷ್ಟಿಯಾಗಿ ಕ್ರೌರ್ಯ ತುಂಬಿದ ಕಾಮವೆಂದು ಕರೆಯಬಹುದೇನೋ??
ಅವನ ಈ ರೀತಿಯ ಹುಡುಕಾಟ ಅವನಿಗೆ ಅವನಂತಹ ಕೆಲವು ಗೆಳೆಯರನ್ನು ಕೊಟ್ಟಿದೆ. ಅವರ ಮೂಲಕ ಅವನಿಗೆ, ಅವನಿಂದ ನನಗೆ ಆಕೆಯ ವಿಚಾರ ಗೊತ್ತಾಗಿದ್ದು ಹೀಗೆ ಮೂಡಬಿದರೆಯ ಪೇಟೆಯಲ್ಲಿ ನಡೆದಾಡುವಾಗ. ಆಕೆಯ ಹೆಸರೆನೆಂಬುದು ಹೆಚ್ಚು ಪ್ರಸ್ತುತವಲ್ಲ. ಏನು ನಡೆಯಿತೆಂಬುದು ಪ್ರಸ್ತುತ. ಆಕೆ ಈ ಹರೆಯದಲ್ಲಿ ಹೊದಲ್ಲೆಲ್ಲಾ ಹಿಂದೆ ಬಿದ್ದ ಹುಡುಗನನ್ನು ಮೊದಮೊದಲೂ ನಿರಾಕರಿಸಿದರೂ ಕೊನೆಗೊಮ್ಮೆ ಆಕೆ ಅವನ ಪ್ರೀತಿಸಿದಳು. ಮುಂಬಯಿಯಲ್ಲಿ ಇದ್ದವ. ಕೈಯಲ್ಲಿ ಬಂಗಾರದ ಬ್ರಾಸ್ಲೆಟ್ ತೊಟ್ಟು ಶೋಕಿ ಮಾಡುತ್ತಿದ್ದವನೊಡನೆ ಬದುಕಿನ ಹುಟ್ಟುಹಾಕುವ ಕನಸ ಕಂಡಳು. ಆತ ಮಾತ್ರ ಆಕೆಯನ್ನು ನಿಗೂಢ (ಅವಳಿಗೆ ಮಾತ್ರ) ಕಾರಣವನಿಟ್ಟುಕೊಂಡು ಪ್ರೀತಿಸಿದ. ಆಕೆ ತಿಳಿಯದಾದಳು. ಮುಖ ನೋಡಿ ಮನುಷ್ಯನನ್ನು ಅಳೆಯಲು ಸಾಧ್ಯವೇ?? ಆಕೆ ಮಾತ್ರ ಅವನನ್ನು ಗಾಢವಾಗಿ ಪ್ರೀತಿಸಿದಳು. ಜೀವದಂತೆ.
ಅದೊಂದು ದಿನ ಅವಳ ಗ್ರಹಚಾರದ ದಿನ. ತಿರುಗುವುದಕ್ಕೆಂದು ಒತ್ತಾಯಿಸಿ ಕರೆದುಕೊಂಡು ಹೋಗಿ, ಒಲ್ಲೆ ಒಲ್ಲೆನೆಂದರು ಆಕೆಯನ್ನು ಹಾಸಿಗೆಗೆ ಬಲವಂತವಾಗಿ ಹತ್ತಿಸಿ ಬಿಟ್ಟ. ದಿನ ಕಳೆದವು ಅವನು ಎಚ್‍ಐವಿ ಸೊಂಕು ಏಡ್ಸಗೆ ತಿರುಗಿ ಸತ್ತು ಹೋದ. ಅವಳು ನಡುಗಿ ಹೋದಳು. ಪಾತಾಳಕ್ಕಿಳಿದಳು. ಅವಳ ಬದುಕಿನ ದೋಣಿ ಮುಳುಗಿ ಹೋಯಿತು. ಕನಸ್ಸಿನ ಕಟ್ಟೆ ಹೊಡೆದು ಹೋಯಿತು. ಅವನಿಗೆ ಮೊದಲೆ ಗೊತ್ತಿತ್ತಂತೆ ರೋಗವಿರುವುದು.
ಆ ಪುಟ್ಟ ಊರಿನ ಜನ ನಿಬಿಡ ನಿಲ್ದಾಣದಲ್ಲಿ ಬೆಳಗ್ಗಿನಿಂದ ನಿಂತುಕಣ್ಸನ್ನೆ, ಕೈ ಸನ್ನೆಯಿಂದ ಅವಳು ಜನರನ್ನೀಗ ಕರೆಯುತ್ತಿದ್ದಾಳೆ. ಈಗ ಆಕೆ ತನ್ನ ದೇಹವನ್ನು ಸಿಕ್ಕಿದ, ಮದದಿಂದ ಸೊಕ್ಕಿದ ಗಂಡಸರಿಗೆಲ್ಲಾ ಹಾಸುತ್ತಿದ್ದಾಳೆ . ಹಣವಿಲ್ಲ ಸೆಕ್ಸ್ ಉಚಿತ. ಆದರೆ, ಒಂದು ಕಂಡಿಶನ್ ಕಾಂಡೋಮ್ ಬಳ್ಳಸುವ ಹಾಗಿಲ್ಲ. ಸೆಕ್ಸ್ ಉಚಿತ ರೋಗ ಖಚಿತ. ಸೇಡು ತೀರಿಸಿಕೊಳ್ಳುತ್ತಿದ್ದಾಳೆ ಅನಿಸುತ್ತಿದೆ!!!!!. ಕಂಡ ಹುಡುಗಿಯರಿಗೆ ಕಣ್ಣು ಹಾಕುವ ಗಂಡಸರನ್ನು ಬನ್ನಿರೋ ದಮ್ಮಿದ್ದರೆ ಎಂದು ಆಹ್ವಾನಿಸುತ್ತಿರುವ ಹಾಗಿದೆ ಅವಳ ನಡವಳಿಕೆ. ತನ್ನ ಬಾಳನ್ನು ಮಣ್ಣು ಪಾಲು ಮಾಡಿದ ಗಂಡು ಸಂತಾನದವರಿಗೆ ಪ್ರತಿಕಾರ ಒಪ್ಪಿಸುತ್ತಿದ್ದಾಳೆ.
ಹೆಣ್ಣು ಎಷ್ಟೆಲ್ಲಾ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ ಇದಕ್ಕೆ ಕೊನೆಯೆ ಇಲ್ಲವೇ ಎನ್ನುವ ಪ್ರಶ್ನೆ ನನ್ನಲ್ಲಿ ಕಾಡುತ್ತಿದೆ. ಮಾಧ್ಯಮ, ಸಮಾಜದಿಂದ ಹಿಡಿದು ಮನೆಯವರೆಗೆ ಎಷ್ಟೆಲ್ಲಾ ದೌರ್ಜನ್ಯವಾಗುತ್ತಿದೆ ಅಲ್ಲವೇ??