ಮೊರೆತ
ಕಡಲು ದಿಗಂತವನ್ನು ತಾಕಿದಂತೆ ಕಾಣುತ್ತಿವೆ. ಕಡಲ ಮೊರೆತ ಈ ದಿನ ಬಿರುಸಾಗಿದೆಯೆಂದು ಅನಿಸುತ್ತಿದೆ. ಎರಡು ವರ್ಷ ನಿಷ್ಪ್ರಯೋಜಕವಾಗಿ ಕಳೆದು ಹೋಗಿದೆ. ಬರೀ ಕಾಲ ಮಾತ್ರವಲ್ಲ ದೊಡ್ಡ ಮೊತ್ತದ ಹಣ ಕೂಡಾ. ಬರೆಯುವುದನ್ನು ಬಿಟ್ಟು ಎಲ್ಲಾದರೂ ತಣ್ಣಗಿದ್ದು ಬಿಡಬೇಕೆಂದು ಹಲವು ಸಲ ಭಾವಿಸಿದ್ದೇನೆ. ಹಿಂದೆ ಸಿಗುತ್ತಿದ್ದ ತೃಪ್ತಿ ಇಲ್ಲವಾಗಿ ಹೋಗಿದೆ. ಬರೆಯುವುದನ್ನು ಬಿಡು ಅಥವಾ ಪಿ.ಜಿ ಬಿಡು ಎರಡು ದೋಣಿಯಲ್ಲಿ ಕಾಲಿಡಲಿಕ್ಕೆ ಸಾಧ್ಯವಿಲ್ಲವೆಂದು ಅಣಕಿಸಿದ್ದು ಮತ್ತೆ ಕಾಡುತ್ತಿದೆ. ನಾನು ನಿನ್ನ ಹಣೆಬರಹ ಬದಲಿಸ ಬಲ್ಲೆನೆಂದು ಕೊನೆಗೂ ತನ್ನ ವ್ಯಾಘ್ರ ರೂಪ ತಾಳಿ ಮತ್ತೆ ಅಲೆಯ ಮೊರೆತಕ್ಕೆ ಕಿವಿ ಕೊಡುತ್ತಾ ಇದ್ದು ಬಿಡುವಂತೆ ಮಾಡಿದ್ದಾನೆ. ಪ್ರತಿಸಲ ಬಹುಮಾನ ಸಿಕ್ಕಿದಾಗ, ಎಲ್ಲೋ ಪ್ರಕಟವಾದಗ ಬರೆಯುವುದು ಪ್ರತಿಭೆಯಲ್ಲವೆಂದು ತಾತ್ಸರದಿಂದ ನೋಡಿ, ಕಾಲೇಜಿನಲ್ಲಿ ಆ ದೊಡ್ಡ ನೋಟಿಸ್ ಬೋರ್ಡಿನಲ್ಲಿ ನಿನಗೆ ಜಾಗವಿಲ್ಲವೆಂಬಂತೆ ಮೀಸೆ ತಿರುಗಿಸಿದ್ದಾನೆ.
ಇನ್ನೂ ಕೆಲವೇ ಕ್ಷಣದಲ್ಲಿ ಮಳೆ ಬರಬಹುದು ಅಥವಾ ಅದು ನನ್ನೊಳಗೆ ಬಚ್ಚಿಟ್ಟ ಅಳು ಆಗಿರಬಹುದು. ಸಮುದ್ರಕ್ಕೆ ಮುಖ ಮಾಡಿ ಹಳದಿ ಮುಖದ ಬೆಳಕು ಸಮುದ್ರದ ಉಬ್ಬರಕ್ಕೆ ಬೆದರಿದಂತೆ ನಿಂತಿದೆ. ಈ ರೀತಿ ಸವೆದು ಹೋಗುವ ದಿನಚರಿಯಲ್ಲಿ ನನ್ನ ಸ್ಥಾನವೆಲ್ಲಿಯೆನ್ನುವುದು ನಿರ್ಧರಿಸಲ್ಪಟ್ಟಿಲ್ಲ. ಈ ಮೊರೆತ ಅಮ್ಮನ ಕಂಗಳ ಸುತ್ತಾ ಕಪ್ಪು ನಕಾಶೆಯಂತೆ ಹರಡಿರುವ ಕಪ್ಪಿನ ಹತಾಶೆಯದ್ದಾಗಿರಬಹುದೇ?? ಯೋಚಿಸುತ್ತೇನೆ. ಪಕ್ಕಕ್ಕೆ ಉತ್ತರ ಸಿಗುವುದಿಲ್ಲ.
ಅನುಭವಿಸಬೇಕಾದ ಬಾಲ್ಯದಲ್ಲಿ ಕೆಲಸಕ್ಕೆಂದು ಹೊರಟು ನಿಂತು ಎಲ್ಲಾ ರೀತಿಯ ದೌರ್ಜನ್ಯವನ್ನು ಅನುಭವಿಸಿ, ಶಾಲೆಗೆ ಹೋಗುವ ಮಕ್ಕಳನ್ನು ಕಾಣುತ್ತಾ ಛೆ!! ನನಗೂ ಅಪ್ಪ ಇದ್ದಿದ್ದರೆ ಶಾಲೆಗೆ ಕಳುಹಿಸುತ್ತಿದ್ದರು ಅಂದುಕೊಳ್ಳುತ್ತಾ ನಿಟ್ಟುಸಿರ ಹೊಗೆಯನ್ನು ಕರಾವಳಿಯ ಹೆದ್ದಾರಿಗಳಲ್ಲಿ ಬಿಡುತ್ತಾ ದಿನ ಸವೆಸಿದ ದಿನಗಳಲ್ಲಿ ಹೀಗೆ ಬಂದು ಕಡಲ ತಡಿಯಲ್ಲಿ ಕೂರುತ್ತಿದ್ದೆ. ಅದು ಹತಾಶೆಗಳನ್ನು ಕಳೆಯುವ ಪ್ರಯತ್ನವಾಗಿತ್ತು. ಈಗಲೂ ಆ ದಿನಚರಿ ನನ್ನ ಬಿಟ್ಟು ಹೋಗಿಲ್ಲ.
ಡಿಪ್ರೆಶನ್ ಆಗಬೇಡವೆಂದು ಆಗಾಗ ಬರುವ ಕರೆಯಲ್ಲಿ ಹೇಳುವ ಮಾತುಗಳು. ಅರೆ! ಎಷ್ಟು ದೊಡ್ಡ ಮಾತು ಡಿಪ್ರೆಶನ್ ಅಂದರೆ ಮೆಜರ್ ಸೈಕಿಯಾಟ್ರಿ ಡಿಸಿಸ್ ನಾನು ಹಾಗೆ ಕಾಣುತ್ತಿರುವೆನೆ? ಅವರ ಮಾತಿಗೆ ಆತಂಕಗೊಳ್ಳುತ್ತೇನೆ. ವ್ಯಕ್ತಿಯಲ್ಲಿ ಮೌನವಿದೆ, ಶಾಂತವಾಗಿರುವ ಹಾಗೆ ಕಾಣಿಸುತ್ತಿದ್ದಾನೆ, ತುಂಭಾ ಯೋಚಿಸುತ್ತಿದ್ದಾನೆ ಎಂದ ತಕ್ಷಣ ಈ ರೀತಿ ಕರೆಯುವುದೇ??!!
ಹಲವು ಸಲ ಇದು ಪ್ರಜಾಪ್ರಭುತ್ವ ಹೌದೇ? ಆಲೋಚನೆ ಕಾಡುತ್ತದೆ. ತನಗಾಗದವರ ಅಂಕವನ್ನು ನುಂಗುವ, ಫೇಲ್ ಮಾಡುವೆನೆಂದು ಹೆದರಿಸಿದ ಉಪನ್ಯಾಸಕರು, ಮುಕ್ಕಿ ತಿನ್ನಲು ಹೊರಟಂತೆ ಕಾಣುವ ಎಸ್‍ಈಜ಼ಡ್‍ಗಳು, ಬಂಡವಾಳಶಾಹಿಗಳು, ಜಾಗದಿಂದ ಎಬ್ಬಿಸಲು ಗುಂಡಾ ಪಡೆಗಳು, ಕಪಟವಾಡುವ ರಾಜಕಾರಣಿಗಳು ಹೀಗೆ… ಜಾಗ ಕಳೆದುಕೊಂಡು ಪುನರ್ವಸತಿಗೆ ಕಾದು ನಿಂತ ಜನಗಳೊಂದಿಗೆ ನಡೆದ ಸಂವಾದ, ತಿಳಿದ ವಾಸ್ತವ, ಸಾಮಾಜಿಕ ಸಮಾನತೆ, ನ್ಯಾಯ, ಇವೆಲ್ಲಾ ಪುಸ್ತಕದ ಬದನೆಕಾಯಿಯಾಗಿ ಕಾಣುತ್ತಿವೆ. ಮಾನವ ಹಕ್ಕುಗಳು ಕಣ್ಣು ಮುಚ್ಚಿದಂತೆ ಗೋಚರವಾಗುತ್ತದೆ.
ಈ ನಡುವೆ ವ್ಯವಸ್ಥೆಯ ವಿರುದ್ಧ ಹೋಗಬೇಡ ನಿನಗೆ ಆಪತ್ತು ಎಂದವರು, ಕಾಲೇಜಿನಲ್ಲಿ ಅನ್ಯಾಯವಾದರೂ ತಮ್ಮ ಅಂಕವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಣ್ಣು ಮುಚ್ಚಿ ಕುಳಿತ ಗೆಳೆಯರು…ನ್ಯಾಯದ ವಿರುದ್ಧ ಕಣ್ಮುಚ್ಚಿ ಕುಳಿತ ಜನರ ನಡುವೆ ನನ್ನ ಆಲೋಚನೆ ವ್ಯರ್ಥ ಅಲಾಪ, ಹಳಹಳಿಕೆಯಾಗಿ ಹೋಗಿದೆ.

Like this:
Like ಲೋಡ್ ಆಗುತ್ತಿದೆ...
ಈ ಮಾತ ನುಡಿದವರು