ನನ್ನ ಕುರಿತು
ನನ್ನೂರು ಪಶ್ಚಿಮ ಘಟ್ಟದ ನಡುವಿನಲ್ಲಿರುವ ಬಾಳೆಹೊನ್ನೂರಿನ ಸಮೀಪದ ಕಡಬಗೆರೆ. ವಿಧಿಯ ಹೊಡೆತಕ್ಕೆ ಸಿಲುಕಿ ಕಡಲ ತಡಿಗೆ ಚಲಿಸಿದವನು. ಭೌತಿಕವಾಗಿ ಕರಾವಳಿಯಲ್ಲಿದ್ದರೂ ಮಾನಸಿಕವಾಗಿ ನನ್ನೂರಲ್ಲೇ ಇದ್ದೇನೆ. ಆ ಮಲೆಯ ಕಾಡುಗಳಲ್ಲಿ; ಕಾಫಿ ತೋಟದಲ್ಲಿ; ಬಿದಿರಿನ ಮೆಳೆಯಲ್ಲಿ ವಿಹರಿಸುತ್ತಿದ್ದೇನೆ.
ನೆಲೆ ನಿಂತಿರುವ ಕರಾವಳಿಯ ಕಡಲ ತಡಿಯಲ್ಲಿ ಕನಸ ಕಾಣುತ್ತಾ.. ಮನಸ್ಸು ಬಂದಷ್ಟು ದೂರ ಬೇಲೆಯಲ್ಲಿ ನಡೆಯುತ್ತಾ, ಪಕ್ಕದಲ್ಲಿ ರಂಪಣಿ ಎಳೆಯುವ ಗೆಳೆಯರ ” ಓ ಬೇಲೆ” ಸದ್ದಿಗೆ ಕಿವಿ ಕೊಡುವವನು ನಾನು. ಮೇಲೆಳುವ ನೀರ ತೆರೆಗೆ ಮನಸ್ಸಿನಲ್ಲಿ ತೆರೆಗಳನ್ನೆಳಿಸುತ್ತಾ ಈ ದಕ್ಷಿಣ ಕನ್ನಡ ಎಷ್ಟು ಸುಂದರವೆಂದುಕೊಳ್ಳುವವನು. ಬಾನಲ್ಲಿ ಮೂಡುವ ಚಿತ್ತಾರಗಳಿಗೆ, ಮನಸ್ಸಿನ ಚಿತ್ತಾರಗಳಿಗೆ ಉಲ್ಲಾಸಗೊಳ್ಳುತ್ತಾ ಸ್ತಬ್ದಗೊಳ್ಳುವ ದಿನಚರಿಯನ್ನು ಪಡುವಣದಲ್ಲಿ ಕಾಯುತ್ತಾ ನೀರ ತೆರೆಗಳಿಗೆ ಕಾಲೊಡ್ಡಿ ಸರಿ ರಾತ್ರಿಗೆ ಮನೆಗೆ ಹೊರಡುವವನು.
ವಿಲಾಸಿಯ ಬದುಕು ಅಂದುಕೊಳ್ಳಬೇಡಿ. ಪ್ರಕೃತಿಯ ಸೌಂದರ್ಯದ ಆರಾಧಕ. ಹೆಸರಿಲ್ಲದವನು ಅಂದುಕೊಳ್ಳಬೇಡಿ ಹೆಸರಿದ್ದು ಹೇಸರಿನ ಅಗತ್ಯ ಇಲ್ಲದವನು. ಹೀಗೆ ನೀರ ತೆರೆಯಲ್ಲಿ ಆಡುತ್ತಾ
ಬದುಕನ್ನು ಕಂಡುಕೊಳ್ಳೊಣವೆಂದು ನೀರ ತೆರೆಗೆ ಮೈ ಮನ ಚಾಚಿದ್ದೇನೆ.
ನೀರ ತೆರೆಗೆ ಮೈಮನ ಚಾಚಿದ ಓ ಅನಾಮಿಕ ಗೆಳೆಯನೇ, ನಾನು ನೀರ ಹನಿಗೆ ಮೈ ಮನ ತೆರೆದಿಟ್ಟವನು. ನಿನ್ನದು ಕಡಲ ಊರು- ನನ್ನದು ಮಳೆಯ ಊರು.
ಧನ್ಯವಾದ ಗೆಳೆಯ.
ಅನಾಮಧೇಯರಾಗಿರೋದು ಅದೆಂಥ ಖುಷಿ ನಿಮಗೆ ಮಾರಾಯ್ರೆ. ಮುಖ ಮರೆಸಿಕೊಂಡು ಬದುಕಬೇಕಾ? ಒಟ್ಟಿನಲ್ಲಿ ಬರಹಗಳು ಚೆನ್ನಾಗಿವೆ. ಸ್ವಗತದಲ್ಲಿ ಎನ್ನುವಂತೆ ಈ ಪ್ರತಿಕ್ರಿಯೆ ಹಾಕುತ್ತಿರುವೆ. ಗಟ್ಟಿಯಾಗಿ ಹೇಳಬೇಕೆಂದರೆ, ಮುಖವೇ ಇಲ್ಲವಲ್ಲ !
ದೂರದ ಊರಿಂದ ನಮ್ಮೂರವರು (ಕರಾವಳಿ) ಬರೆಯುವುದನ್ನು ಓದಲು ತುಂಬ ಕುಶಿಯಾಗುತ್ತದೆ, ಆಗಾಗ ಬರೀತಿರಿ:)
ನಮಸ್ಕಾರ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ತುಂಭಾ ದಿನದಿಂದ ಈ ಕಡೆ ಬರದೆ ಇರದೆ ಇದ್ದುದರಿಂದ
ನಿಮ್ಮ ಪ್ರತಿಕ್ರಿಯೆಗೆ ಪ್ರತಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಿರಲಿಲ್ಲ. ಕ್ಷಮೆ ಇರಲಿ. ಆಗಾಗ ಬರುತ್ತೀರಿ.
ಕರಾವಳಿಯರ ಮಾತುಗಳು ಕರಾವಳಿಯ ಬಗ್ಗೆ ಬರೆಯಲು ಇನ್ನಷ್ಟು ಸ್ಪೂರ್ತಿ ನೀಡುತ್ತದೆ.
ಧನ್ಯವಾದಗಳು
ಲೇಖನ ಚೆನ್ನಾಗಿದೆ. ತುಳುವರು ಕನ್ನಡದ ಹ್ಯಾಂಗ್ ಓವರ್ನಿ೦ದ ಹೊರಗೆ ಬರಬೇಕಾಗಿದೆ. ಆಗ ಮಾತ್ರ ತುಳುನಾಡು ಉಳಿಯಬಹುದು. ಆದರೆ ಇದು ಸಾಧ್ಯವೇ?