ಪಾರಿವಾಳಗಳು ರೆಕ್ಕೆ ಬಿಚ್ಚಿಕೊಳ್ಳುತ್ತಿವೆ


ಅವಳ ಕಣ್ಣುಗಳಲ್ಲಿ
ದಿನದಿಂದ ದಿನಕ್ಕೆ
ಪ್ರೀತಿಯ ಕುಸುಮಗಳು
ದಟ್ಟವಾಗಿ ಅರಳಿಕೊಳ್ಳುತ್ತಿವೆ.

ಅವನ ಸ್ವಪ್ನದಂತಹ ದಿನಗಳು
ಸಾಕಾರಗೊಳ್ಳುತ್ತಿದೆ ಅವಳೆದೆಯಲ್ಲಿ
ಚಿಗುರುತ್ತಿರುವ ಕನಸುಗಳಲ್ಲಿ.

ಅವನೀಗ ಈ ಮಳೆಯ ನಡುವೆಯೂ
ಮಳೆ ತಂತಿಯೊಂದನ್ನು ಸಂಗೀತಕ್ಕಾಗಿ
ಹಿತವಾಗಿ ಮೀಟುತ್ತಿದ್ದಾನೆ.
ರಾಗಕ್ಕೆ ಶ್ರುತಿ ಹಿಡಿದಿದ್ದಾನೆ.

ಅದೋ ಅಲ್ಲಿ -
ಪಾರಿವಾಳಗಳು ರೆಕ್ಕೆ ಬಿಚ್ಚಿಕೊಳ್ಳುತ್ತಿವೆ
ಅಲ್ಲವರು ಪಾರಿವಾಳವನ್ನು ಹಾಗೆ
ಬಿಟ್ಟಿರಬೇಕು ಅಥವಾ
ಕ್ಷಣ ಕಾಲಕ್ಕೆ ಶಾಂತಿ ಸ್ಥಿರವಾಗಿರಬೇಕು

About ನೀರ ತೆರೆ
ಕಡಲ ತಡಿಯಲ್ಲಿ ಕನಸ ಕಾಣುತ್ತಾ.. ಮನಸ್ಸು ಬಂದಷ್ಟು ದೂರ ಬೇಲೆಯಲ್ಲಿ ನಡೆಯುತ್ತಾ, ಪಕ್ಕದಲ್ಲಿ ರಂಪಣಿ ಎಳೆಯುವ ಗೆಳೆಯರ " ಓ ಬೇಲೆ" ಸದ್ದಿಗೆ ಕಿವಿ ಕೊಡುವವನು ನಾನು. ಮೇಲೆಳುವ ನೀರ ತೆರೆಗೆ ಮನಸ್ಸಿನಲ್ಲಿ ತೆರೆಗಳನ್ನೆಳಿಸುತ್ತಾ ಈ ದಕ್ಷಿಣ ಕನ್ನಡ ಎಷ್ಟು ಸುಂದರವೆಂದುಕೊಳ್ಳುವವನು. ಬಾನಲ್ಲಿ ಮೂಡುವ ಚಿತ್ತಾರಗಳಿಗೆ, ಮನಸ್ಸಿನ ಚಿತ್ತಾರಗಳಿಗೆ ಉಲ್ಲಾಸಗೊಳ್ಳುತ್ತಾ ಸ್ತಬ್ದಗೊಳ್ಳುವ ದಿನಚರಿಯನ್ನು ಪಡುವಣದಲ್ಲಿ ಕಾಯುತ್ತಾ ನೀರ ತೆರೆಗಳಿಗೆ ಕಾಲೊಡ್ಡಿ ಸರಿ ರಾತ್ರಿವರೆಗೆ ಮನೆಗೆ ಹೊರಡುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.